ಸಂಸ್ಕೃತ ಪದಗಳು ಸಂಧಿಯಾಗುವಾಗ 'ಸ'ಕಾರ 'ತ' ವರ್ಗಾಕ್ಷರಗಳಿಗೆ 'ಷ'ಕಾರ 'ಟ'ವರ್ಗಾಕ್ಷರಗಳು ಸೇರಿದರೆ ಸಕಾರ ತವರ್ಗಾಕ್ಷರಗಳ ಜಾಗದಲ್ಲಿ ಷ ಕಾರ ಟ ವರ್ಗಾಕ್ಷರಗಳೇ ಆದೇಶವಾಗುತ್ತವೆ. ಇದು ಸಂಸ್ಕೃತ ಸಂಧಿ. ಸಂಸ್ಕೃತ ವ್ಯಾಕರಣದಲ್ಲಿ ಈ ಸಂಧಿಯ ನಿಯಮ ಹೀಗಿದೆ: ष्टुना ष्टुः| (ಪಾಣಿನೀಯ ಸೂತ್ರ) सकारतवर्गयोः षकार-तवर्गे परे षकार-तवर्गे आदिष्टे भवतः| ಉದಾಹರಣೆ: ವಿದ್ವತ್ + ಟೀಕೆ = ವಿದ್ವಟ್ಟೀಕೆ (ವಿದ್ವ)ತ್ + ಟ್(ಈಕೆ) (ವಿದ್ವ)ಟ್ + ಟ್(ಈಕೆ) = ವಿದ್ವಟ್ಟೀಕೆ ರಾಮಸ್ + ಷಷ್ಟಃ (ರಾಮ)ಸ್ + ಷ್(ಅಷ್ಟಃ) (ರಾಮ)ಷ್ + ಷ್(ಅಷ್ಟಃ) = ರಾಮಷ್ಷಷ್ಟಃ ಶಾರ್ಙಿನ್ + ಢೌಕಸೇ (ಶಾರ್ಙಿ)ನ್ + ಢ್(ಔಕಸೇ) (ಶಾರ್ಙಿ)ಣ್ + ಢ್(ಔಕಸೇ) = ಶಾರ್ಙಿಣ್ಢೌಕಸೇ ತತ್ + ಟೀಕಾ (ತ)ತ್ + ಟ್(ಈಕಾ) (ತ)ಟ್ + ಟ್(ಈಕಾ) = ತಟ್ಟೀಕಾ